ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಜಿಟಲ್ ಮಾಹಿತಿ ಕಣ್ಗಾವಲು ಶಾಸನಬದ್ಧ ಸಂಸ್ಥೆಗಷ್ಟೇ ಅಧಿಕಾರ

Last Updated 29 ಮಾರ್ಚ್ 2022, 11:25 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿನ, ಶಾಸನಬದ್ದ ಕಾನೂನು ಜಾರಿ ಸಂಸ್ಥೆಗಳಷ್ಟೇ ದೂರವಾಣಿ ಸಂಭಾಷಣೆ ಅಥವಾ ವಿದ್ಯುನ್ಮಾನ ಸ್ವರೂಪದಲ್ಲಿ ಪ್ರಸರಣವಾಗುವ ಮಾಹಿತಿ ದಾಖಲಿಸುವ ಅಧಿಕಾರವನ್ನು ಹೊಂದಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸಂಸತ್ತಿನಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಕುಮಾರ್ ಮಿಶ್ರಾ ಈ ಮಾಹಿತಿ ನೀಡಿದ್ದಾರೆ.

ವಾಟ್ಸ್ಆ್ಯಪ್‌ ಚರ್ಚೆ ಸೇರಿದಂತೆ ಯಾವುದೇ ರೀತಿಯ ಡಿಜಿಟಲ್ ಮಾಹಿತಿ ಮೇಲೆ ಕಣ್ಗಾವಲು ಇಡಲು ಯಾವುದಾದರೂ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಂಸ್ಥೆಗೆ ಅಧಿಕಾರ ನೀಡಲಾಗಿದೆಯೇ ಎಂದು ಪ್ರಶ್ನಿಸಲಾಗಿತ್ತು.

ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ರ ಅನ್ವಯ ಕೇವಲ ದೇಶದ ಶಾಸನಬದ್ಧ ಕಾನೂನು ಜಾರಿ ಸಂಸ್ಥೆಗಳಿಗಷ್ಟೇ ಇಂತಹ ಅಧಿಕಾರವಿದೆ ಎಂದು ಸಚಿವರು ತಿಳಿಸಿದ್ದಾರೆ.

‘ಮಾಹಿತಿ ತಂತ್ರಜ್ಞಾನ (ಮಾಹಿತಿ ಸುರಕ್ಷತೆ, ಅವಲೋಕನ, ನಿರ್ವಹಣಾ) ನಿಯಮಗಳು 2009’ರಲ್ಲೂ ಇದರ ಉಲ್ಲೇಖವಿದೆ. ಮಾಹಿತಿ ಆಲಿಸಬೇಕಾದ ಕ್ರಮಗಳ ಕುರಿತಂತೆಯೂ ನಿರ್ದಿಷ್ಟ ಮಾರ್ಗಸೂಚಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT